ಯಂತ್ರ ನಾಟಿಗೆ ತೊಡಗಿಕೊಂಡ ನಂತರ ಕೂಲಿಯಾಳು ಸಮಸ್ಯೆ ದೂರವಾಗಿದೆ. ಭತ್ತದ ಇಳುವರಿಯೂ ಜಾಸ್ತಿಯಾಗಿದೆ ಎಕರೆಗೆ 13-15 ಕ್ವಿಂಟಾಲ್ ಇಳುವರಿ ದೊರೆಯುತ್ತಿದೆ. ಹುಲ್ಲು ಯತೇಚ್ಚವಾಗಿ ಸಿಗುತ್ತದೆ ಹಾಗಾಗಿ ನಮಗೆ ಭತ್ತ ಕೃಷಿ ಲಾಭದಾಯಕವಾಗಿದೆ’ ಎನ್ನುತ್ತಾರೆ ಶರ್ಮಿಳಾ ನಾಯಕ.
ಕುಂದಾಪುರ ತಾಲೂಕಿಗೆ ರಾಜ್ಯ ಅದ್ಯಯನ ಪ್ರವಾಸಕ್ಕೆ ಹೋಗಿದ್ದ ಇವರು ಅಲ್ಲಿನ ಯಂತ್ರ ನಾಟಿ ವಿಧಾನವನ್ನು ಅದ್ಯಯನ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಆರ್ಥಿಕ ಸಹಕಾರ ಪಡೆದು ಯಂತ್ರ ಖರೀದಿಸಿ ತಂದರು.