success story

‘ಆತ್ಮವಿಶ್ವಾಸವೇ ಆರ್ಥಿಕ ಮುನ್ನಡೆಗೆ ಸಾಕ್ಷಿ’

Posted on

“ಮೊದಲು ನಾವು ಮನೆಯಲ್ಲಿ ಕುಳಿತು ಮನೆ ಕೆಲಸ ಮುಗಿಸಿ ನೆರೆ ಹೊರೆಯವರೊಟ್ಟಿಗೆ ಕಾಲಾಹರಣ ಮಾಡ್ತಿದ್ವಿ. ಮೊದ್ಲು ಗೊತ್ತಿದ್ದಂಗ ಖಾನವಳಿಗೆ ರೊಟ್ಟಿ ಅಗತ್ತ ಐತಿ ಎಚಿದು ಈ ಉದ್ಯೋಗ ಮಾಡಾಕ ಮನಸ್ಸ ಮಾಡಿದ್ವಿ. ಧರ್ಮಸ್ಥಳ ಸಂಸ್ಥೆಯಿಚಿದ ನಮಗೆ ತುಂಬು ಸಹಕಾರ ಸಿಕ್ಕೈತಿ”
“ನಾವು ತಯಾರ ಮಾಡೋ ರೊಟ್ಟಿ ಹಿಟ್ಟಿನಲ್ಲಿ ಅಕ್ಕಿ ಹಿಟ್ಟು ಸೇರಿಸಲ್ಲ. ಹಿಂಗಾಗಿ ಎಲ್ರೂ ನಮ್ಮ ರೊಟ್ಟಿ ತೊಗೊಳ್ಳಾಕ ಬಾಳ ಇಷ್ಟ ಪಡ್ತಾರ್ರೀ. ” ಎನ್ನುವರು ಹೆವ್ಮ್ಮೆಯಿಚಿದ ಶ್ರೀಮತಿ ತೋಟಮ್ಮ.

success story

‘ಜ್ಞಾನ ದೀವಿಗೆ ಜೀವನಕ್ಕೆ ಬೆಳಕ ತಂದಿತು’

Posted on

ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಮಸ್ಕಿ ಗ್ರಾಮದ ಶ್ರೀಮತಿ ಸುಮನ ಇವರಿಗೆ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಸಣ್ಣದಾಗಿ ಹೈನುಗಾರಿಕೆಯೊಂದಿಗೆ ಮನೆಯಲ್ಲಿ ಉಪ್ಪಿನಕಾಯಿ ಚಟ್ನಿ, ಹಪ್ಪಳ ಇತರೆ ಆಹಾರ ಉತ್ಪಾದನೆಯೊಂದಿಗೆ ವ್ಯಾಪಾರವನ್ನು ಮಾಡಿಕೊಂಡು ಹೋದವರು.

Agriculture

ತೆಂಗಿನ ತೋಟದಲ್ಲಿ ಸಿರಿಧಾನ್ಯ ಬೆಳೆ

Posted on

ಹೊಲದಲ್ಲಿ ಬೆಳೆದ ತೃಣಧಾನ್ಯಗಳು ಅಸಂಖ್ಯಾತರ ಊಟದ ಬಟ್ಟಲಿಗೆ ಸೇರಬೇಕೆಂದರೆ ಧಾನ್ಯಗಳು ಪಾಕದ ರೂಪ ಪಡೆದುಕೊಳ್ಳಬೇಕು. ಅಡುಗೆಯ ಘಮಲು, ಅದನ್ನು ಆಸ್ವಾದಿಸುವಾಗ ಸಿಗುವ ವಿಶೇಷ ಅನುಭೂತಿ ಇನ್ನಷ್ಟು, ಮತ್ತಷ್ಟು ಸಿರಿಪಾಕಗಳನ್ನು ಇಷ್ಟಪಡುವಂತೆ ಮಾಡಬೇಕು. ಹೊಸ ಹೊಸ ಅಡುಗೆ ಪ್ರಯೋಗಗಳಿಗೆ ಧಾನ್ಯಗಳು ಒಗ್ಗಿಕೊಂಡರೆ ಸಹಜವಾಗಿಯೇ ಬೇಡಿಕೆ ಕುದುರುತ್ತಿರುತ್ತದೆ. ಬೆಳೆಯುವ ರೈತರ ಪಾಲಿಗೆ ಅದೃಷ್ಟ ಖುಲಾಯಿಸುತ್ತದೆ. ಸಿರಿಧಾನ್ಯಗಳ ಮೌಲ್ಯವನ್ನು ಜಗತ್ತು ಅರಿತುಕೊಳ್ಳುವ ಕಾರ್ಯದ ಹಿಂದೆ ಸಿರಿಧಾನ್ಯ ಪಾಕ ತಜ್ಞರ ಕೌಶಲ್ಯ ಅಡಗಿದೆ.

Agriculture

ಬೀಜ ಬಿತ್ತದೆ ಭರ್ಜರಿ ಫಸಲು.

Posted on

ಮಳೆ ಬಿದ್ದು ಬೆಳೆದು ನಿಂತ ಫಸಲೆಲ್ಲಾ ಭೂಮಿ ಪಾಲಾದರೆ ರೈತರಿಗಾಗುವ ಸಂಕಷ್ಟ ಅಷ್ಟಿಷ್ಟಲ್ಲ. ಶ್ರಮವಹಿಸಿ ದುಡಿದು ಕಾಲಕಾಲಕ್ಕೆ ಗೊಬ್ಬರ, ಔಷಧಿಗಳನ್ನು ಸಿಂಪಡಿಸಿ ಫಸಲು ಕೊಯ್ಲಿಗೆ ಬಂದಾಗ ಹಾನಿಯಾದರೆ ದುಖಃ ಸಹಜವೇ. ಆದರೆ ಸಿರಿಧಾನ್ಯ ಬೆಳೆದರೆ ಇಂತಹ ದುಃಖ ಪಡುವ ಅಗತ್ಯವೇ ಎದುರಾಗುವುದಿಲ್ಲ ಎನ್ನುತ್ತಾರೆ ಹಾವೇರಿ ತಾಲೂಕಿನ ಸಂಗೂರು ಗ್ರಾಮದ ಮಂಜುನಾಥ ಹೆಗ್ಗಣ್ಣನವರ್. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರಾದ ಇವರು ಯೋಜನೆಯ ನೆರವಿನಿಂದ ಸಿರಿಧಾನ್ಯ ಕೃಷಿ ಮಾಡುತ್ತಿದ್ದಾರೆ.

success story

“ಸ್ವ-ಉದ್ಯೋಗಕ್ಕೆ ಮಾದರಿ ಹೆಣ್ಣು- ನಂದಿನಿ”

Posted on

ನನ್ನ ಈ ಬೆಳವಣಿಗೆಗೆ ಧೈರ್ಯ ತುಂಬಿ ನನ್ನನ್ನು ಗುರುತಿಸಿ ಸ್ವ-ಉದ್ಯೋಗ ಮಾಡಬೇಕು ಎಂಬ ಹಂಬಲಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿರುವ ಧರ್ಮಸ್ಥಳ ಯೋಜನೆಗೆ ಸದಾ ಋಣಿಯಾಗಿರುತ್ತೇನೆ ಎನ್ನುತ್ತಾರೆ ನಂದಿನಿ.

Agriculture

ಕೃಷಿ ಸಂವಹನ ತಂದಿತು ಆದಾಯದ ಚಿಂತನ

Posted on

ಹೊನ್ನಾಳಿ ತಾಲ್ಲೂಕಿನ ಹುಣಸಗಟ್ಟಿ ಗ್ರಾಮದ ನಿವಾಸಿ ಶ್ರೀಮತಿ ನಿರ್ಮಲಾರವರು ಗುಲಾಬಿ ಕೃಷಿಯ ಗಂಧವೇ ಇರದ ಈ ಊರಿನಲ್ಲಿ ತಮಗೆ ಮಾಡಲು ಸಾಧ್ಯವಿಲ್ಲ ಅಂದುಕೊಂಡವರಿಗೆ ಸಾಧ್ಯ ಎಂದು ತೋರಿಸಿಕೊಟ್ಟರು.

success story

‘ಬಿಡುವಿನ ಸಮಯದಲ್ಲಿ ಸ್ವ-ಉದ್ಯೋಗ’ ಮತ್ತು ಇನ್ನಿತರ ಯಶೋಗಾಥೆಗಳು

Posted on

ಸುನಿತಾರವರು ತಮ್ಮ ಬಿಡುವಿನ ಸಮಯದಲ್ಲಿ ಟೈಲರಿಂಗ್, ಹಿಟ್ಟಿನ ಗಿರಣಿ ಮಾಡಿಕೊಂಡು ಗ್ರಾಮದ ಇತರ ಮಹಿಳೆಯರಿಗೆ ಮಾದರಿಯಾಗಿರುತ್ತಾರೆ. ಸೊರಬ ತಾಲೂಕಿನ ಶೈಲಾ ದಿನಕ್ಕೆ 5 ರಿಂದ 6 ತಾಸು ಬಿಡುವಿನ ಸಮಯದಲ್ಲಿ 20 ರಿಂದ 25 ಕೆ.ಜಿ ಊದು ಭತ್ತಿ ತಯಾರಿಸಿ ಯಶಸ್ಸನ್ನು ಕಂಡುಕೊಂಡು ಮಾದರಿಯಾಗಿರುತ್ತಾರೆ.

Agriculture

ಸುಲಭ ನಿರ್ವಹಣೆಯ ಪಪ್ಪಾಯ ಕೃಷಿ….

Posted on

ರಾಣೆಬೆನ್ನೂರು ತಾಲೂಕಿನ ಮೆಡ್ಲೇ ರಿ ವಲಯದ ಅರೆಮಲ್ಲಾಪುರ ಕಾರ್ಯಕ್ಷೇತ್ರದ ಶ್ರೀ ಶಿವಶಕ್ತಿ ಸ್ವ-ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಗೀತಾ ವೀರೇಶ ಬೆನ್ನೂರುರವರದ್ದು ಕೃಷಿ ಅಭಿವೃದ್ಧಿಗೋಸ್ಕರ ಪ್ರಗತಿನಿಧಿ ಪಡೆದುಕೊಂಡು ಪಪ್ಪಾಯ ಕೃಷಿ ಮಾಡಿರುತ್ತಾರೆ.

success story

ಸೇವಾಪ್ರತಿನಿಧಿಯಾಗಿ ತನ್ನ ಬದುಕನ್ನು ಹಸನಾಗಿಸಿಕೊಂಡ ಮೀನಾಕ್ಷಿ

Posted on

ಸೇವಾಪ್ರತಿನಿಧಿಯಾಗಿ ತನ್ನ ಬದುಕನ್ನು ಹಸನಾಗಿಸಿಕೊಂಡ ಮೀನಾಕ್ಷಿ. ಮಧುಗಿರಿ ತಾಲ್ಲೂಕಿನ ಮಧುಗಿರಿ ವಲಯದ ಬಿಜವರ-ಎ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯಾದ ಮೀನಾಕ್ಷಿ ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯವರು.

Agriculture

ಕಲ್ಲಪ್ಪರ ಹೊಲದಲ್ಲಿ ಸಿರಿಧಾನ್ಯಗಳ ಅಬ್ಬರ

Posted on

ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದವರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿಬಂಧು ಸಂಘದ ಸದಸ್ಯರಾದ ಇವರು ಸಿರಿಧಾನ್ಯ ರೈತ ಒಕ್ಕೂಟದ ಸದಸ್ಯರೂ ಆಗಿರುತ್ತಾರೆ.