ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವು ಇರಲಿ- ಶ್ರದ್ಧಾ ಅಮಿತ್

Posted on Leave a commentPosted in News, Women Empowerment

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಥಿ ಯೋಜನೆಯ ಮೈಸೂರು ಜಿಲ್ಲಾ ಕಛೇರಿಯಲ್ಲಿ ನಡೆದ ಮಕ್ಕಳ ಸಂರಕ್ಷಣೆಯ ಕುರಿತು ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಕಾರ್ಯಗಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪುತ್ರಿಯಾದ ಶ್ರದ್ಧಾ ಅಮಿತ್‍ರವರು ಉದ್ಘಾಟಿಸಿದರು.

ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ

Posted on Leave a commentPosted in News, Women Empowerment

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಪ್ರತಿ ವರ್ಷದಂತೆ 5 ಕೇಂದ್ರಗಳಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ.ನಂಜನಗೂಡು ತಾಲ್ಲೂಕಿನಲ್ಲಿ ದಿನಾಂಕ 14.08.2017 ರಂದು ಕಳಲೆ ಜ್ಞಾನವಿಕಾಸ ಕೇಂದ್ರದಲ್ಲಿ ಹಾಗೂ ದೇವಿರಮ್ಮನಹಳ್ಳಿ ವಲಯದ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಎರಡು ಕೇಂದ್ರದ ಸದಸ್ಯರುಗಳು ಹಾಗೂ ಗ್ರಾಮಸ್ಥರು ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಆಗಷ್ಟ್ ತಿಂಗಳಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ವರದಿ

Posted on Leave a commentPosted in News, Women Empowerment

ಆಗಷ್ಟ್ ತಿಂಗಳಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ.ಶಿಕಾರಿಪುರ ಯೋಜನಾ ವ್ಯಾಪ್ತಿಯ ಜ್ಞಾನವಿಕಾಸ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾತ್ತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡು ಬಿ.ಪಿ. ಮತ್ತು ಶುಗರ್ ಕಾಯಿಲೆಯ ಬಗ್ಗೆ ಪರೀಕ್ಷೆ ಮಾಡಲಾಗಿತ್ತು. ಹಗರಿಬೊಮ್ಮನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಅಧ್ಯಯನ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವು ಉತ್ತಮವಾಗಿ ಮೂಡಿ ಬಂದಿರುತ್ತದೆ.

ಕೃಷಿಯಿಂದ ಗೆದ್ದ ಶ್ರೀಮತಿ ವೇದಾವತಿ ಬಿನ್ ರಾಜಣ್ಣ

Posted on Leave a commentPosted in Agriculture, success story, Women Empowerment

ಕೃಷಿಯಿಂದ ಗೆದ್ದ ಶ್ರೀಮತಿ ವೇದಾವತಿ ಬಿನ್ ರಾಜಣ್ಣ. ಕುಟುಂಬಕ್ಕೆ ಆಸರೆಯಾಗಿದ್ದ ಜಮೀನನ್ನು ಬೇರೊಬ್ಬರಿಗೆ ಭೋಗ್ಯಕ್ಕೆ ಹಾಕಿ ಕೃಷಿಕರಾದ ವೇದಾವತಿ ಇನ್ನೊಬ್ಬರಲ್ಲಿ ದಿನಗೂಲಿ ಆಳಾಗಿ ದುಡಿಯುತ್ತಿದ್ದರು. ಬದುಕಿನ ಬಂಡಿಯ ಭರವಸೆಯೇ ಕಮರಿ ಹೋಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ನಮ್ಮ ಜಮೀನು ನಮ್ಮ ಕೈ ಸೇರಿತು ಅಂತಾರೆ ವೇದಾವತಿಯವರು.

ಒಕ್ಕೂಟ ಪದಗ್ರಹಣ ಹಾಗೂ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ

Posted on Leave a commentPosted in Microfinance, News, Women Empowerment

ಬಾಗಲಕೋಟ ತಾಲೂಕಿನ ಚಿಕ್ಕಶೆಲ್ಲಿಕೇರಿ ಗ್ರಾಮದ ಪಡಿ ಮಲ್ಲೆಶ್ವರ ದೇವಸ್ಥಾನ ಸಭಾ ಭವನದಲ್ಲಿ ಒಕ್ಕೂಟ ಪದ ಗ್ರಹಣ ಮತ್ತು ಮಹಿಳಾ ಜ್ಞಾನ ವಿಕಾಸ ವಿಚಾರ ಗೋಷ್ಠಿ ಕಾರ್ಯಕ್ರಮ. ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಎಸ್. ಜಿ. ಮೋರೆ ಆರ್ಥಿಕ ಸಾಕ್ಷರತಾ ಸಲಹೆಗಾರರು ಮಾಹಿತಿ ನೀಡಿದರು.

ಅನಾರೋಗ್ಯ ಅಡ್ಡಿಯಾಗಲಿಲ್ಲ ಆತ್ಮವಿಶ್ವಾಸದ ನಡಿಗೆಗೆ

Posted on Leave a commentPosted in success story, Women Empowerment

‘ಕ್ರಿಯಾಶೀಲತೆಯು ವೃಧ್ಧಾಪ್ಯವನ್ನು ಓಡಿಸುವುದರಲ್ಲಿ ಸಂಶಯವೇ ಇಲ್ಲ.’ ‘ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಎಂದೂ ಮುಪ್ಪಿಲ್ಲ’ ಎಂಬುದಕ್ಕೆ ಉದಾಹರಣೆಯೇ ಶ್ರೀಮತಿ ಸುರೇಖಾ ನಾಯ್ಕ. ಮೂಲತಃ ಮಂಗಳೂರಿನ ಪ್ರಾಂತ್ಯದವರಾದ ಇವರು ನೆಲಸಿರುವುದು ನವಲಗುಂದ ತಾಲ್ಲೂಕಿನ ಭದ್ರಾಪುರದಲ್ಲಿ.

” ರಾಗಿ ಗಿರಣಿ, ಬದುಕು ಬಂಗಾರದ ಭರಣಿ “

Posted on Leave a commentPosted in success story, Women Empowerment

“ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ” ಎಂಬ ಗಾದೆ ಮಾತಿದೆ. ಮನುಷ್ಯ ಬದುಕಬೇಕಾದಲ್ಲಿ ಉತ್ತಮವಾದ ಕಾಯಕದಲ್ಲಿ ತೊಡಗಿ ಅವಿರತ ಪರಿಶ್ರಮ ಪಟ್ಟಾಗ ಸಮಾಜದಲ್ಲಿ ಆತ ಎಲ್ಲರಿಗೂ ಸರಿಸಮಾನವಾಗಿ ಬದುಕಲು ಸಾಧ್ಯ ಎನ್ನುವುದಕ್ಕೆ ಉತ್ತಮ ನಿದರ್ಶನ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ವಲಯದ ಕಣಿವೆಕೊಪ್ಪಲು ಗ್ರಾಮದ ಭಾಗ್ಯಮ್ಮ.

ದಾರಿಯಾದ ದಿನಸಿ ಅಂಗಡಿ ಮತ್ತು ಇನ್ನಿತರ ಯಶೋಗಾಥೆಗಳು

Posted on Leave a commentPosted in success story, Women Empowerment

ದಾರಿಯಾದ ದಿನಸಿ ಅಂಗಡಿ ಮತ್ತು ಇನ್ನಿತರ ಯಶೋಗಾಥೆಗಳು. ಸೊರಬ ತಾಲ್ಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಬದುಕು ಕಟ್ಟಿಕೊಂಡವರ ಕಥೆಗಳು.

ಕುಟುಂಬಕ್ಕೆ ಆಶಾಕಿರಣವಾದ ಧರ್ಮಸ್ಥಳ ಯೋಜನೆ

Posted on Leave a commentPosted in success story, Women Empowerment

ಕುಟುಂಬಕ್ಕೆ ಆಶಾಕಿರಣವಾದ ಧರ್ಮಸ್ಥಳ ಯೋಜನೆ ಯಡವನಹಳ್ಳಿ ವಲಯದ ತಳಲುತೊರೆ ಗ್ರಾಮದ ಆಂಜನೇಯ ಸ್ವಾಮಿ ಸ್ವಸಹಾಯ ಸಂಘದ ಸದಸ್ಯರಾದ ಅನುಷಾರವರು ತಾಲೂಕಿಗೆ ಯೋಜನೆಯು ಬಂದಾಗ ಸಂಘಕ್ಕೆ ಸೇರಿದರು. ಈ ರೀತಿ ಮಂಜುನಾಥ ಸ್ವಾಮಿಯ ಕೃಪೆ ನಮ್ಮ ಕುಟುಂಬದ ಉನ್ನತಿಗೆ ಕಾರಣವಾಗಿದೆ ಎಂದು ಹೆಮ್ಮೆಯಿಂದ ತಿಳಿಸಿರುತ್ತಾರೆ.

ವೃತ್ತಿ ವೃದ್ಯಾಪಕ್ಕೆ ಅಡೆತಡೆಯಲ್ಲ

Posted on Leave a commentPosted in success story, Women Empowerment

ಸತತವಾಗಿ 3 ರಿಂದ 4 ವರ್ಷದವರೆಗೂ ಬರಲಾಲದ ಕ್ಷಾಮವನ್ನೆ ಅನುಭವಿಸುತ್ತಿರುವ ನವಲಗುಂದ ತಾಲ್ಲೂಕಿನ ಭದ್ರಾಪುರ ಗ್ರಾಮಸ್ಥರಲ್ಲಿ ಶ್ರೀಮತಿ ಶಂಕ್ರವ್ವ ಕೂಡಾ ಒಬ್ಬರು. ಇಳಿಯ ವಯಸ್ಸನ್ನು ಪರಿಗಣಿಸದೇ ಯಾವುದಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಕಳೆದ ವರ್ಷ ಪ್ರಾರಂಭಿಸಿಯೇ ಬಿಟ್ಟರು. ಈ ಚಿಂತನೆ ಮೂಡಿದ್ದು ಇವರಿಗೆ ಹೇಮಾವತಿ ಜ್ಞಾನವಿಕಾಸ ಕೇಂದ್ರದಲ್ಲಿ ನೀಡಿದ ‘ಸ್ವ ಉದ್ಯೋಗ’ದ ಮಾಹಿತಿಯಿಂದ.