ಕಸೂತಿ ಕೌಶಲ್ಯ ತಂದಿತು ಆರ್ಥಿಕ ಸಾಫಲ್ಯ

ಅಮ್ಮಿನಬಾವಿಯಲ್ಲಿ ಹೆಚ್ಚು ಕೃಷಿಕರೇ ಇರುವುದು. ಇದೇ ಭಾಗದ ಕೆಲವು ಮುಸ್ಲಿಂ ಸಮುದಾಯದ ಪುರುಷರು ಗೌಂಡಿ, ಮೇಸ್ತ್ರಿ, ಗಾರೆ ಕಟ್ಟಡ ಕೆಲಸಕ್ಕೆ ಹೋಗುವವರಿದ್ದಾರೆ. ಇಂತಹ ವೃತ್ತಿಯಲ್ಲಿ ತೊಡಗಿಸಿಕೊಂಡವರ ಪತ್ನಿಯರು ತಮ್ಮನ್ನು ತಾವು ಆಲಸ್ಯದಿಂದ ದೂರ ತೆಗೆದುಕೊಂಡು ಹೋಗಿದ್ದಾರೆ. ಇವರು ಮನೆಯ ಬಿಡುವಿನ ವೇಳೆಯಲ್ಲಿ ಕಲಿತ ‘ಕಸೂತಿ ಕಲೆ’ಯಿಂದ ಜೀವನವನ್ನು ಹೆಣೆದುಕೊಂಡಿದ್ದಾರೆ.