Uncategorized

ಆಹಾರ ಧಾನ್ಯಗಳ ಕಿಟ್ ವಿತರಣೆ

Posted on

ಕೊರೋನಾ ವಿಪತ್ತಿನ ಸಮಯ ತೊಂದರೆಗೆ ಒಳಗಾಗಿದ್ದ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್ ವಿತರಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನ ಹಸ್ತ ಚಾಚಿದೆ. ಲಿಂಗಸಗೂರು ತಾಲೂಕಿನ ವಿವಿಧ ಭಾಗಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಅತೀವ ಸಂಕಷ್ಟಕ್ಕೆ ಒಳಗಾಗಿದ್ದವು. ಅಂದು ದುಡಿದು ಅಂದೇ ಉಣ್ಣುವ ಅನಿವಾರ್ಯತೆಯಲ್ಲಿರುವ ಇಂತಹ ಕುಟುಂಬಗಳು ಹಸಿವಿನಿಂದ ಬಾಧಿತಗೊಂಡಿದ್ದವು. ಇಂತಹ ಕುಟುಂಬಗಳನ್ನು ಗುರುತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರ ಮನೆ ಬಾಗಿಲಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ […]

News

ಕಲಾವಿದರು ಹಾಗೂ ಕಿರು ವ್ಯಾಪಾರಿಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

Posted on

ಲಾಕ್ ಡೌನ್ ಕಾರಣದಿಂದಾಗಿ ತಾಲ್ಲೂಕಿನಲ್ಲಿ ಸಮಸ್ಯೆಗೆ ಸಿಲುಕಿದ್ದ ಕಲಾವಿದರು ಹಾಗೂ ಸಣ್ಣ ಸಣ್ಣ ವ್ಯಾಪಾರಿ ಕುಟುಂಬಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನ ಹಸ್ತ ಚಾಚಿದೆ. ಸಂಚಾರ ಕೈಗೊಂಡು ಸಾಬೂನು ಪುಡಿ ಮಾರುತ್ತಿದ್ದ ಕುಟುಂಬಗಳು, ಪೆನ್ನು ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದ ಕುಟುಂಬಗಳು, ಪಿನ್ನುಗಳು, ಪಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಕುಟುಂಬಗಳು, ಬೀದಿ ನಾಟಕ, ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಕುಟುಂಬಗಳು ತೀರಾ ಸಂಕಷ್ಟದಲ್ಲಿದ್ದವು. ಮಾತಾ ಮಾಣಿಕೇಶ್ವರಿ ನಗರದಲ್ಲಿ ಗುಡಿಸಲಿನಲ್ಲಿ ವಾಸವಾಗಿರುವ ಈ ಕುಟುಂಬಗಳು ಆಹಾರದ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದವು. ಇತ್ತೀಚೆಗೆ […]

News

ಸಂತ್ರಸ್ತ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

Posted on

ಕೋಲಾರ ತಾಲೂಕಿನ ತಲಗುಂದ ಗ್ರಾಮದಲ್ಲಿ ನೆಲೆನಿಂತಿದ್ದ ಸಂತ್ರಸ್ತ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀ ಬಿ.ಸಿ ಒಡೆಯರ್ ಕಿಟ್‍ಗಳನ್ನು ವಿತರಿಸಿದರು. ತಲಗುಂದ ಕೆರೆಯಂಗಳದಲ್ಲಿ ಈ ಕುಟುಂಬಗಳು ವಾಸವಾಗಿದ್ದವು. ಹಳೆಯ ಸೀರೆ, ತಾಡಪಾಲ್‍ಗಳನ್ನು ಬಳಸಿಕೊಂಡು ತಾತ್ಕಾಲಿಕ ಗುಡಿಸಲು ಕಟ್ಟಿಕೊಂಡು ನೆಲೆ ನಿಂತಿದ್ದ ಹಲವು ಅಲೆಮಾರಿ ಕುಟುಂಬಗಳು ಸಮಸ್ಯೆಗೆ ಸಿಲುಕಿದ್ದವು. ಯಾದಗಿರಿ, ವಿಜಯಪುರ, ಗದಗ ಭಾಗಗಳಿಂದ ಕೂಲಿಗೆಂದು ಬಂದ ಕುಟುಂಬಗಳು ಅಲ್ಲಿದ್ದವು. ಊರೂರು ತಿರುಗಿ ಹಳೆಯ ಬಟ್ಟೆಗಳನ್ನು ವಿಕೃಯಿಸುವುದು, ಕೂದಲು ಸಂಗ್ರಹಿಸಿ ಮಾರಾಟ ಮಾಡಿ ಗಳಿಕೆ […]

News

ಆಹಾರ ಧಾನ್ಯಗಳ ಕಿಟ್ ವಿತರಣೆ

Posted on

ಕೋಲಾರ ತಾಲೂಕಿನ ಕಟಾರಿಪಾಳ್ಯದ ಸಂತ್ರಸ್ಥ ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೂಲಕ ಧವಸಧಾನ್ಯಗಳ ಕಿಟ್ ವಿತರಿಸಲಾಯಿತು. ಕಳೆದ ಆರು ತಿಂಗಳ ಹಿಂದೆ ಉತ್ತರ ಕರ್ನಾಟಕ ಭಾಗದಿಂದ ರಸ್ತೆ ರಿಪೇರಿ ಕೆಲಸಕ್ಕೆಂದು ಬಂದು ವಾಸವಾಗಿರುವ ಈ ಕುಟುಂಬಗಳು ಲಾಕ್‍ಡೌನ್ ಪರಿಣಾಮ ಕೆಲಸವಿಲ್ಲದೇ ತೊಂದರೆಗೆ ಸಿಲುಕಿದ್ದವು. ಶೆಡ್‍ಗಳಲ್ಲಿ ವಾಸವಾಗಿರುವ ಈ ಕುಟುಂಬಗಳು ಕೆಲಸವಿಲ್ಲದ ಕಾರಣ ಕೈಯಲ್ಲಿ ಹಣವಿಲ್ಲದೇ, ಅಡುಗೆ ಮಾಡಿ ಉಣ್ಣೋಣವೆಂದರೆ ಮನೆಯಲ್ಲಿ ಧಾನ್ಯಗಳಿಲ್ಲದೇ ಸಂಕಟ ಅನುಭವಿಸುತ್ತಿದ್ದವು. ಯಾರಾದರೂ ಬಂದು ಊಟ ಪೂರೈಸಿ ಉಪಕಾರ […]

News

40 ಬಡಕುಟುಂಬಕ್ಕೆ ಕಿಟ್ ವಿತರಿಣೆ

Posted on

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೆಸರುಗಟ್ಟ ವಲಯದಲ್ಲಿ ಪಡಿತರ ಚೀಟಿ ಲಭ್ಯವಿಲ್ಲದ ಉತ್ತರ ಪ್ರದೇಶದ ನಿವಾಸಿಗಳು ಗಾರೆ ಕೆಲಸ ಹಾಗೂ ಪೇಂಟಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಬಡಕುಟುಂಬದ ಊಟ ಉಪಹಾರಕ್ಕೆ ಲಾಕ್ಡೌನ್ ನಿಂದಾಗಿ ತಮ್ಮ ಸ್ವಂತ ಊರಿಗೆ ಹೋಗಲಾರದೆ ಕೆಲಸವು ಇಲ್ಲದೆ ಕಷ್ಟಪಡುತ್ತಿದ್ದ ಬಾಡಿಗೆ ಮನೆಯಲ್ಲಿದ್ದ 40 ಕುಟುಂಬಗಳಿಗೆ ಪೂಜ್ಯರ ಆಶಯದಂತೆ ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಂತೆ ಕಿಟ್ ವಿತರಿಸಲಾಯಿತು.

News

ಯೋಜನೆಯ ವತಿಯಿಂದ ದಿನಸಿ ಕಿಟ್ ವಿತರಣೆ

Posted on

ದಿನಾಂಕ 29/04/2020 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗಡದಿಂ ಆಸು ಪಾಸಿನ 20 ನಿರ್ಗತಿಕ ಕುಟುಂಬ ಗಳಿಗೆ 15 ದಿನಗಳಿಗೆ ಸಾಕಾಗುವಷ್ಟು ದಿನಸಿ ಕಿಟ್ ಯೋಜನೆಯ ವತಿಯಿಂದ ವಿತರಣೆ ಮಾಡಿದವರು. ಬಾಗೇಪಲ್ಲಿ B ವಲಯದ ಮೇಲ್ವಿಚಾರಕರಾದ ಮಿಥಿಲ. ಟಿ. ಎನ್, ಸೇವಾಪ್ರತಿನಿಧಿಗಳಾದ, ಮಾಧವಿ, ಗಂಗೂಳಪ್ಪ, ಶಿರೀಷ, ಲಕ್ಷ್ಮಿ, ಮಂಜುಳ ಮತ್ತು ದೇವರಗುಡಿಪಲ್ಲಿ ಒಕ್ಕೂಟದ ಅಧ್ಯಕ್ಷರಾದ ಪ್ರಭಾವತಿಯವರ ಉಪಸ್ಥಿತಿಯಲ್ಲಿ ಭಗೀರಥ ಸಂಘದ ಸದಸ್ಯರು ಸಹಕಾರ ನೀಡಿದರು.