ಸುಜ್ಞಾನನಿಧಿ ಶಿಷ್ಯವೇತನ ದಶಮಾನೋತ್ಸವ ವರ್ಷ ೨೦೧೭-೧೮ರ ವಿತರಣಾ ಕಾರ್ಯಕ್ರಮ
Posted on೨೦೦೭ರಲ್ಲಿ ಯೋಜನೆಯು ತನ್ನ ಬೆಳ್ಳಿಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಯೋಜನೆಯ ಪಾಲುದಾರ ಕುಟುಂಬಗಳ ಮಕ್ಕಳು ತಾಂತ್ರಿಕ ವಿದ್ಯಾಭ್ಯಾಸವನ್ನು ಹೊಂದಿ ಉತ್ತಮ ಬದುಕನ್ನು ಸಾಧಿಸಬೆಕೆಂಬ ಸದುದ್ದೇಶದಿಂದ ಆಯ್ದ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಆರಂಭಿಸಲಾಯಿತು.ಸುಜ್ಞಾನನಿಧಿ ಶಿಷ್ಯವೇತನದ ದಶಮಾನೋತ್ಸವ ವಿತರಣಾ ಕಾರ್ಯಕ್ರಮವನ್ನು “ಭಾರತದ ಖ್ಯಾತ ವಿಜ್ಞಾನಿ, “ಭಾರತರತ್ನ ಡಾ| ಸಿ.ಎನ್.ಆರ್. ರಾವ್ ಇವರ ಸಮ್ಮುಖದಲ್ಲಿ ನೆರವೇರಿಸುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ವೆಜ್ಞಾನಿಕ ಶಿಕ್ಷಣದ ಬಗ್ಗೆ ಹೊಸ ಶಕೆಯೊಂದನ್ನು ಆರಂಭಿಸುವಂತಾಗಿದೆ.