ತರೀಕೆರೆ ತಾಲ್ಲೂಕು ಮಟ್ಟದ ಕೃಷಿ ಉತ್ಸವ-2014
Posted onಅತಿಯಾದ ರಾಸಾಯನಿಕ ಸಿಂಪಡಣೆಯಿಂದ ಮಣ್ಣು ಸತ್ವಹೀನವಾಗುತ್ತಿದ್ದು, ನಿಸರ್ಗದ ವಿರುದ್ಧ ಹೋಗುತ್ತಿರುವ ನಾವು ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದೇವೆ ಎಂದು ಶ್ರೀ ಜಿ.ಎಚ್.ಶ್ರೀನಿವಾಸ್ ಹೇಳಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ವಿವಿಧ ಸಮಿತಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ, ಸರಕಾರಿ ಇಲಾಖೆಗಳು, ಒಕ್ಕೂಟಗಳ ಆಶ್ರಯದಲ್ಲಿ ದಿನಾಂಕ:14/12/2014 ರ ಭಾನುವಾರ ನಡೆದ ತಾಲ್ಲೂಕು ಮಟ್ಟದ ಕೃಷಿ ಉತ್ಸವದಲ್ಲಿ ಅವರು ಮಾತನಾಡಿ, ವಿಜ್ಞಾನ ಪ್ರಕೃತಿಗೆ ಹತ್ತಿರವಾಗಬೇಕು ಆದರೆ ಅದು ಪ್ರಕೃತಿಗೆ ವ್ಯತಿರಿಕ್ತವಾಗುತ್ತಿರುವುದು ವಿಷಾದನೀಯ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವ ಉದ್ಯೋಗ, […]