Agriculture

ಬೀಜ ಬಿತ್ತದೆ ಭರ್ಜರಿ ಫಸಲು.

Posted on

ಮಳೆ ಬಿದ್ದು ಬೆಳೆದು ನಿಂತ ಫಸಲೆಲ್ಲಾ ಭೂಮಿ ಪಾಲಾದರೆ ರೈತರಿಗಾಗುವ ಸಂಕಷ್ಟ ಅಷ್ಟಿಷ್ಟಲ್ಲ. ಶ್ರಮವಹಿಸಿ ದುಡಿದು ಕಾಲಕಾಲಕ್ಕೆ ಗೊಬ್ಬರ, ಔಷಧಿಗಳನ್ನು ಸಿಂಪಡಿಸಿ ಫಸಲು ಕೊಯ್ಲಿಗೆ ಬಂದಾಗ ಹಾನಿಯಾದರೆ ದುಖಃ ಸಹಜವೇ. ಆದರೆ ಸಿರಿಧಾನ್ಯ ಬೆಳೆದರೆ ಇಂತಹ ದುಃಖ ಪಡುವ ಅಗತ್ಯವೇ ಎದುರಾಗುವುದಿಲ್ಲ ಎನ್ನುತ್ತಾರೆ ಹಾವೇರಿ ತಾಲೂಕಿನ ಸಂಗೂರು ಗ್ರಾಮದ ಮಂಜುನಾಥ ಹೆಗ್ಗಣ್ಣನವರ್. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರಾದ ಇವರು ಯೋಜನೆಯ ನೆರವಿನಿಂದ ಸಿರಿಧಾನ್ಯ ಕೃಷಿ ಮಾಡುತ್ತಿದ್ದಾರೆ.

Agriculture

ಸಮೃದ್ದ ಹಾರಕ ಕೃಷಿ

Posted on

ಕೊಪ್ಪಳ ತಾಲೂಕಿನ ಕುಕನಪಳ್ಳಿ ಗ್ರಾಮದ ವಿರೂಪಾಕ್ಷಯ್ಯ ಹಿರೇಮಠರದು ಹದಿನಾರು ಎಕರೆ ಜಮೀನು. ಹತ್ತು ಎಕರೆ ಮೆಕ್ಕೆ ಜೋಳ, ಅರ್ಧ ಎಕರೆ ಶೇಂಗಾ, ಒಂದು ಎಕರೆ ಮೆಣಸು, ಅರ್ಧ ಎಕರೆ ಜಾನುವಾರುಗಳಿಗೆ ಮೇವಿನ ಹುಲ್ಲು, ಎರಡು ಎಕರೆ ತರಕಾರಿ ಕೃಷಿ ಮಾಡುತ್ತಾರೆ.

success story

ಜ್ಞಾನವಿಕಾಸದ ಪ್ರೋತ್ಸಾಹ- ಕೃಷಿಗೆ ಬಲ

Posted on

ಸೋಮವಾರಪೇಟೆ ತಾಲೂಕಿನ ಬೇಬಿಯವರು ‘ಜೀವನಜ್ಯೋತಿ’ ಜ್ಞಾನವಿಕಾಸ ಕೇಂದ್ರದ ಸದಸ್ಯರಾಗಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೃಷಿ ಅಭಿವೃದ್ಧಿ ಮತ್ತು ಸೊಪ್ಪು ತರಕಾರಿ ಬೆಳೆಗೆ ಹಂತ ಹಂತವಾಗಿ ಪ್ರಗತಿನಿಧಿ ಪಡೆದುಕೊಂಡರು. ಇದೇ ತಾಲೂಕಿನ ಪದ್ಮಾ ಜ್ಞಾನವಿಕಾಸ ಕೇಂದ್ರದ ಸಹಾಯದಿಂದ, ಆರ್ಥಿಕ ಸಹಾಯ ಪಡೆದು ಕೃಷಿ ಮತ್ತು ವ್ಯಾಪಾರ ಎರಡನ್ನೂ ಅಭಿವೃದ್ಧಿಪಡಿಸಿಕೊಂಡಿದ್ದಾರೆ…

success story

ಕೈಬಿಡದ ಅರಿಶಿನ ಕೃಷಿ

Posted on

ಬೇಡಿಕೆಗೆ ತಕ್ಕಂತೆ ಬೆಳೆಯನ್ನು ಬದಲಾಯಿಸಿಕೊಂಡರೆ, ಆಧುನಿಕತೆಯನ್ನು ಅಳವಡಿಸಿಕೊಂಡರೆ
ಮಣ್ಣು ಯಾವತ್ತೂ ರೈತನ ಕೈಬಿಡುವುದಿಲ್ಲ. ಮೈಸೂರು ಜಿಲ್ಲೆಯ ದೊಡ್ಡೇಕೊಪ್ಪಲು ಗ್ರಾಮದ ಜಗದೀಶ್ ಈ ಮಾತಿಗೊಂದು ನಿದರ್ಶನ.

Agriculture

ಬಂಗಾರವಾದ ಬರಡು ಭೂಮಿ

Posted on

ಅನ್ನದಾತನ ಸ್ಥಿತಿ ಶ್ರೀಮಂತನಾದರೂ ಬಡವ ಎಂಬಂತೆ. ಎಕರೆಗಟ್ಟಲೆ ಭೂಮಿಯಿದ್ದರೂ ಕೈಯಲ್ಲಿ ಕಾಸಿಲ್ಲ. ಕೃಷಿ ಭೂಮಿ ಅಭಿವೃದ್ಧಿಪಡಿಸಿ ಆದಾಯ ಪಡೆಯೋಣ ಎಂದರೆ ಬಂಡವಾಳವಿಲ್ಲ. ಬ್ಯಾಂಕ್ಗಳೂ ಇಂತಹ ರೈತರ ಸಹಾಯಕ್ಕೆ ಬರದಿದ್ದಾಗ ಆತ ಕಂಗಾಲಾಗಬಹುದು. ಇದೇ ಸ್ಥಿತಿಯಲ್ಲಿದ್ದ ರೈತನೊಬ್ಬನ ಸಾಧನಾಗಾಥೆ ಇಲ್ಲಿದೆ. ಹೇಳಿ ಕೇಳಿ ಕುಣಿಗಲ್ ತಾಲೂಕಿನ ಅಮೃತೂರಿನಿಂದ 10 ಕಿ.ಮೀ ದೂರದಲ್ಲಿರುವ ಕಟ್ಟಿಗೆಹಳ್ಳಿ ಗ್ರಾಮ ಬಡತನಕ್ಕೆ ಹೆಸರುವಾಸಿ. ಈ ಊರಿನಲ್ಲಿರುವ ಅನೇಕ ಬಡ ಕುಟುಂಬಗಳಲ್ಲಿ ದೇವರಾಜುರವರ ಕಡು ಬಡತನದಲ್ಲಿದ್ದ ಕುಟುಂಬವೂ ಒಂದಾಗಿತ್ತು. ಇದ್ದ ಐದು ಎಕರೆ ಬರಡು ಭೂಮಿಯಲ್ಲಿ […]

Agriculture

ಮಹಿಳಾ ಸಾಧಕಿಯರಿಗೊಂದು ನಮನ…

Posted on

ಸ್ವಾವಲಂಬನೆಯ ಕನಸು ನಿಜವಾದಾಗ… ಮನಸ್ಸಿದ್ದರೆ ಮಾರ್ಗ ಎಂಬುದು ಬರೀ ಗಾದೆ ಮಾತಾಗಿ ಉಳಿದಿಲ್ಲ. ನಿದರ್ಶನಗಳು ಸಾಕಷ್ಟಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ಬಸವ ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ಮಲ್ಲಮ್ಮ C/o ಮಹಾಲಿಂಗಪ್ಪ ಅವರಿಗೆ ತಾವೂ ಏಕೆ ಸ್ವಾವಲಂಭಿ ಜೀವನ ಸಾಗಿಸಬಾರದು ಎಂದು ಮನಸ್ಸಾಗಿದ್ದೇ ತಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯತ್ತ ಮುಖ ಮಾಡಿದರು. ಯೋಜನೆಯಿಂದ ರೂ. 70,000 ಪ್ರಗತಿನಿಧಿ ಪಡೆದು, ರೂ. 85,000 ಬಂಡವಾಳ ಹಾಕಿ ಶ್ಯಾವಗೆ ತಯಾರಿಸುವ ಯಂತ್ರ ಖರೀದಿಸಿದರು. […]

success story

ಮುದುಡಿದ ಮನೆಯಲ್ಲಿ ಮಲ್ಲಿಗೆಯ ಗಮಗಮ

Posted on

ಬಂಟ್ವಾಳ: ಪಂಚದುರ್ಗಾ ಗುಂಪಿನ ಸದಸ್ಯೆ ಪದ್ಮಾವತಿ 1996 ರಲ್ಲಿೆ ಮದುವೆಯಾಗಿ ಬಂದಿದ್ದು ಬಂಟ್ವಾಳ ತಾಲೂಕಿನ ಕಕ್ಯೆಪದವು ಗುಡ್ಡಗಾಡು ಪ್ರದೇಶದ ಹಳೆ ಮನೆಯೊಂದಕ್ಕೆ. ಕೂಲಿ ಮಾಡಿ ಮನೆಯ ಬಂಡಿ ದೂಡುತ್ತಿದ್ದ ಗಂಡ, ಬೆಳಕಿಗೆ ಚಿಮಣಿ ದೀಪದ ಆಸರೆ. ಆದರೀಗ ಪದ್ಮಾವತಿಯ ಮನೆಯಲ್ಲಿ ಎಲ್ಲೆಲ್ಲೂ ಮಲ್ಲಿಗೆಯ ಗಮಗಮ. ಪದ್ಮಾವತಿಯವರ ಯಶೋಗಾತೆ ಆರಂಭವಾಗಿದ್ದು 2005 ರಲ್ಲಿ. ಮೊದಲು ಶ್ರೀ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯ ಸದಸ್ಯೆಯಾದ ಇವರು, 2006ರಲ್ಲಿ ಭೂಮಿಕಾ ಎಂಬ ಹೆಸರಿನ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾದರು. ಮೊದಲ ಹಂತದಲ್ಲಿ ರೂ 10,000 […]

success story

ಹಡಿಲು ಭೂಮಿಯಿಂದ ಭತ್ತ ಬೆಳೆಯುತ್ತಿರುವ ದಂಪತಿ

Posted on

ಹಡಿಲು ಬಿದ್ದ ಭೂಮಿ ಕಾಣುತ್ತಿರುವ ಈ ಸಂದರ್ಭದಲ್ಲಿ ಉಡುಪಿಯು ಕೂಡಾ ಹೊರತಾಗಿಲ್ಲ. ಭೂಮಿಯನ್ನು ಉತ್ತು ಬಿತ್ತಿ ಬೆಳೆ ಬೆಳೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮೊದಲು ಹೇಳುತ್ತಿದ್ದರು ಬೆಳಗಾದ ತಕ್ಷಣ ತೋಟದ ಕಡೆ ಮುಖವನ್ನು ಮಾಡುತ್ತಿದ್ದ ಜನ ಈಗ ಪೇಟೆ ಕಡೆ ಮುಖವನ್ನು ಮಾಡುತ್ತಿದ್ದಾರೆ ಎಂದು ಭೂಮಿ ಬರಡಾಗಿಯೇ ಉಳಿಯಬೇಕಾದ ಸಂದರ್ಭ ಬಂದೊದಿಗಿದೆ. ಬೆವರು ಸುರಿಸದೆ ದುಡಿಯುವ ಮನಸಿಲ್ಲದೆ ಕೊಲಿಯಾಳುಗಳ ಸಮಸ್ಯೆಯಿಂದಾಗಿ ಕೃಷಿಯೇತರ ಚಟುವಟಿಕೆ ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ಬೇಡಿಕೆಗೆ ಅನುಗುಣವಾಗಿ […]