ಸ್ವಸಹಾಯ ಸಂಘಗಳಿಂದ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ

Posted on Leave a commentPosted in Dharmasthala, News, News on Groups

ಸ್ವಸಹಾಯ ಸಂಘಗಳಿಂದ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ಈ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಧರ್ಮಸ್ಥಳದಲ್ಲಿ ದಿನಾಂಕ 22-10-2017ರಂದು ಸಂಜೆ 4-00 ಗಂಟೆಗೆ ನೆರವೇರಿಸಲಿದ್ದಾರೆ.

ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ ಮತ್ತು ಸ್ವಸಹಾಯ ಸಂಘ ಉದ್ಘಾಟನಾ ಕಾರ್ಯಕ್ರಮ

Posted on Leave a commentPosted in Communnity Development, News

ದಿನಾಂಕ: 12.10.2017 ರಂದು ಕೂಡ್ಲಿಗಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಕೂಡ್ಲಿಗಿ ತಾಲೂಕು ವತಿಯಿಂದ ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮ

ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಕೇಂದ್ರಕ್ಕೆ, ಡಾ|| ವೀರೆಂದ್ರ ಹೆಗ್ಡೆಯವರು ಭೇಟಿ

Posted on Leave a commentPosted in Dharmasthala, News, Training

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಕೇಂದ್ರಕ್ಕೆ NIST, ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೆಂದ್ರ ಹೆಗ್ಡೆಯವರು ಭೇಟಿ ನೀಡಿದರು. ಈ ಒಂದು ಸಂದರ್ಭದಲ್ಲಿ ವಿವಿಧ ಜಿಲ್ಲೆಯಿಂದ ಬಂದ ನಗದು ಸಹಾಯಕರಿಗೆ ಮಾನವೀಯ ಮೌಲ್ಯಗಳ ಕುರಿತು ಮಾತನಾಡಿದರು.

ಜನಜಾಗೃತಿ ಸಮಾವೇಶ ಮತ್ತು ಪಾನಮುಕ್ತ ಅಭಿನಂದನಾ ಕಾರ್ಯಕ್ರಮ

Posted on Leave a commentPosted in News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಕಳ ತಾಲೂಕು ಜಂಟಿ ಸಹಕಾರದೊಂದಿಗೆ ಅಕ್ಟೋಬರ್ 2 ರ ಗಾಂಧೀ ಜಯಂತಿ ಪ್ರಯುಕ್ತ ಜನಜಾಗೃತಿ ಸಮಾವೇಶ ಮತ್ತು ಪಾನಮುಕ್ತರ ಅಭಿನಂದನಾ ಕಾರ್ಯಕ್ರಮವನ್ನು ಬೈಲೂರು ವಲಯದ ಸರಕಾರಿ ಪದವಿ ಪೂರ್ವ ಕಾಲೇಜು ಹಾಲ್ಡಿಂಗ್ ಸಭಾಭವನದಲ್ಲಿ ನಡೆಸಲಾಯಿತು.

ಪಾನಮುಕ್ತರ ಅಭಿನಂದನೆ ಮತ್ತು ನವ ಜೀವನೋತ್ಸವ ಕಾರ್ಯಕ್ರಮ

Posted on Leave a commentPosted in News

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನೋತ್ಸವದ ಪ್ರಯುಕ್ತ ಪಾನಮುಕ್ತರ ಅಭಿನಂದನೆ ಮತ್ತು ನವ ಜೀವನೋತ್ಸವ ಕಾರ್ಯಕ್ರಮವನ್ನು ದಿನಾಂಕ 02.10.2017ರಂದು ಡಾ|| ಬಿ.ಆರ್.ಅಂಬೇಡ್ಕರ್ ಭವನ, ತಿ.ನರಸೀಪುರದಲ್ಲಿ ನಡೆಸಲಾಯಿತು.

ತಿ.ನರಸೀಪುರದಲ್ಲಿ ಸಿರಿ ಧಾನ್ಯ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮ

Posted on 1 CommentPosted in Agriculture, News

ಸಿರಿ ಧಾನ್ಯ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಶ್ರೀನಂದಿಬಸವೇಶ್ವರ ಕಲ್ಯಾಣ ಮಂಟಪ, ಬೀಡನಹಳ್ಳಿ ಗ್ರಾಮ,ತಿ.ನರಸೀಪುರದಲ್ಲಿ ದಿನಾಂಕ:25.09.2017ರಂದು ನಡೆಸಲಾಯಿತು.

ಸುಜ್ಞಾನನಿಧಿ ಶಿಷ್ಯವೇತನ ದಶಮಾನೋತ್ಸವ ವರ್ಷ ೨೦೧೭-೧೮ರ ವಿತರಣಾ ಕಾರ್ಯಕ್ರಮ

Posted on Leave a commentPosted in Communnity Development, Dharmasthala, News, Uncategorized

೨೦೦೭ರಲ್ಲಿ ಯೋಜನೆಯು ತನ್ನ ಬೆಳ್ಳಿಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಯೋಜನೆಯ ಪಾಲುದಾರ ಕುಟುಂಬಗಳ ಮಕ್ಕಳು ತಾಂತ್ರಿಕ ವಿದ್ಯಾಭ್ಯಾಸವನ್ನು ಹೊಂದಿ ಉತ್ತಮ ಬದುಕನ್ನು ಸಾಧಿಸಬೆಕೆಂಬ ಸದುದ್ದೇಶದಿಂದ ಆಯ್ದ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಆರಂಭಿಸಲಾಯಿತು.ಸುಜ್ಞಾನನಿಧಿ ಶಿಷ್ಯವೇತನದ ದಶಮಾನೋತ್ಸವ ವಿತರಣಾ ಕಾರ್ಯಕ್ರಮವನ್ನು “ಭಾರತದ ಖ್ಯಾತ ವಿಜ್ಞಾನಿ, “ಭಾರತರತ್ನ ಡಾ| ಸಿ.ಎನ್.ಆರ್. ರಾವ್ ಇವರ ಸಮ್ಮುಖದಲ್ಲಿ ನೆರವೇರಿಸುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ವೆಜ್ಞಾನಿಕ ಶಿಕ್ಷಣದ ಬಗ್ಗೆ ಹೊಸ ಶಕೆಯೊಂದನ್ನು ಆರಂಭಿಸುವಂತಾಗಿದೆ.

ವಡ್ಡರಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ಅನುದಾನ ವಿತರಣೆ

Posted on Leave a commentPosted in Communnity Development, News

ತಿ.ನರಸೀಪುರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ರಚನೆಗೆ ಯೋಜನೆಯ ಸಮುದಾಯ ಅಭಿವೃದ್ದಿ ಕಾರ್ಯಕ್ರಮದಡಿಯಲ್ಲಿ ಅನುದಾನ ಯೋಜನಾಧಿಕಾರಿ ವಿತರಿಸಿದರು.

ಕಾರ್ಕಳದಲ್ಲಿ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ

Posted on Leave a commentPosted in Agriculture, News, Training

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ ತಾಲೂಕಿನ ಅಜೆಕಾರು ವಲಯದ ಶಿರ್ಲಾಲು ಗ್ರಾಮದ ಶ್ರೀ ಸಿದ್ದಲಕ್ಷ್ಮಿ ಸಭಾಭವನದಲ್ಲಿ ದಿನಾಂಕ 10.09.17 ರಂದು ವಲಯಮಟ್ಟದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ನಡೆಸಲಾಯಿತು.