ಸತತವಾಗಿ 3 ರಿಂದ 4 ವರ್ಷದವರೆಗೂ ಬರಲಾಲದ ಕ್ಷಾಮವನ್ನೆ ಅನುಭವಿಸುತ್ತಿರುವ ನವಲಗುಂದ ತಾಲ್ಲೂಕಿನ ಭದ್ರಾಪುರ ಗ್ರಾಮಸ್ಥರಲ್ಲಿ ಶ್ರೀಮತಿ ಶಂಕ್ರವ್ವ ಕೂಡಾ ಒಬ್ಬರು. ಇಳಿಯ ವಯಸ್ಸನ್ನು ಪರಿಗಣಿಸದೇ ಯಾವುದಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಕಳೆದ ವರ್ಷ ಪ್ರಾರಂಭಿಸಿಯೇ ಬಿಟ್ಟರು. ಈ ಚಿಂತನೆ ಮೂಡಿದ್ದು ಇವರಿಗೆ ಹೇಮಾವತಿ ಜ್ಞಾನವಿಕಾಸ ಕೇಂದ್ರದಲ್ಲಿ ನೀಡಿದ ‘ಸ್ವ ಉದ್ಯೋಗ’ದ ಮಾಹಿತಿಯಿಂದ.
ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ರತ್ನಶ್ರೀ ಜ್ಞಾನವಿಕಾಸದ ಸದಸ್ಯೆಯಾಗಿರುವ ಶಾಂತ ಕೇಂದ್ರಕ್ಕೆ ಸೇರ್ಪಡೆಯಾಗಿದ್ದು 2002 ರಲ್ಲಿ. ಕೇಂದ್ರದ ಸಂಪೂರ್ಣ ಲಾಭ ಪಡೆದುಕೊಂಡ ಇವರು, ಅಲ್ಲಿ ದೊರೆಯುವ ಮಾಹಿತಿಯನ್ನು ಬಳಸಿಕೊಂಡು ತಮ್ಮ ಜೀವನದಲ್ಲಿ ಪರಿವರ್ತನೆ ಕಂಡುಕೊಂಡರು. ಜ್ಞಾನವಿಕಾಸ ಕಾರ್ಯಕ್ರಮ ರತ್ನಶ್ರೀಯವರ ಬಾಳಲ್ಲೂ ಬದಲಾವಣೆಯ ಗಾಳಿ ಬೀಸಿತ್ತು. . .