ಬಸವಳಿದ ಕೃಷಿಯ ನಡುವೆ ಆಸರೆಯಾದ ಚಂಡು ಹೂವು

ಯೋಜನೆ ಏರ್ಪಡಿಸಿದ ಅದ್ಯಯನ ಪ್ರವಾಸದಿಂದಾಗಿ ಹೊಸ ಕೃಷಿ ವಿಧಾನ ಕಲಿಯಲು ಸಾಧ್ಯವಾಯಿತು. ಉತ್ತಮ ಗಳಿಕೆ ಕಂಡುಕೊಳ್ಳಲು ಅನುಕೂಲವಾಯಿತು ಎನ್ನುವ ಅಭಿಪ್ರಾಯ ಸಿದ್ದಪ್ಪ ಅವರದು.

ಕೊರಲೆ ಬೆಳೆಯಲು ಕೊರಗಬೇಕಿಲ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿ ಬಂಧು ಸದಸ್ಯರಾದ ಎಚ್. ಕೆ. ರಘು ಸಿರಿಧಾನ್ಯ ಕೃಷಿಯಲ್ಲಿ ಪಳಗಿದ್ದಾರೆ. ಕೊರಲೆ ಕೃಷಿಯಲ್ಲಿ ಇವರದು ಬಹುದೊಡ್ಡ ಹೆಸರು. ಹಲವು ದಶಕಗಳಿಂದ ಕೊರಲೆಯ ಕೃಷಿಯಲ್ಲಿ ತೊಡಗಿದ್ದು ತುಮಕೂರು ಭಾಗಗಳಲ್ಲಿ ಇವರನ್ನು ಕೊರಲೆ ರಘು ಎಂದೇ ಗುರುತಿಸಲಾಗುತ್ತಿದೆ.

ಬಾಳು ಬೆಳಗಿತು ಬಾಳೆ

ಬಾಳೆ ಕೃಷಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ಪಡೆದಿದ್ದಾರೆ. ಇತ್ತೀಚೆಗೆ ಮನೆ ನಿರ್ಮಾಣ ಮಾಡುತ್ತಿದ್ದು ಗ್ರಾಮಾಭಿವೃದ್ದಿ ಯೋಜನೆಯ ಆರ್ಥಿಕ ನೆರವು ಪಡೆದಿದ್ದಾರೆ.

ಬರದಲ್ಲಿ ನೆರಳಾಯಿತು ನೇರಳೆ

ಮುಳಬಾಗಿಲು ತಾಲೂಕಿನ ದುಗ್ಗಸಂದ್ರದ ದೇವರಾಜ ಶೆಟ್ಟಿಯವರು ಎರಡು ಎಕರೆ ಜಾಗವಿರುವ ಕೃಷಿಕರು. ಕಳೆದ ಮೂರು ವರ್ಷಗಳಿಂದ ಯೋಜನೆಯ ‘ಆಂಜನೇಯ’ ಪ್ರಗತಿಬಂಧು ಸಂಘದ ಸದಸ್ಯರು. ಸೇವಾಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹೊಸ ಆಲೋಚನೆಗಳು ನಾಲ್ಕು ವರ್ಷಗಳ ಹಿಂದೆ ನೇರಳೆ ಹಣ್ಣಿನ ಕೃಷಿಯನ್ನು ಕೈಗೊಳ್ಳಲು ಪ್ರೇರೇಪಿಸಿದವು.

ಬದುಕು ಬೆಳಗಿದ ಕರ್ಪೂರ

ವಿಮಲಾ ಗ್ರಾಮಾಭಿವೃದ್ಧಿ ಯೋಜನೆಯ ‘ಶಿವ ಸ್ವಸಹಾಯ ಸಂಘ’ವನ್ನು ಸೇರಿದರು. ಸ್ವಉದ್ಯೋಗ ವಿಸ್ತರಿಸಿಕೊಳ್ಳಲು, ಕರ್ಪೂರ ತಯಾರಿಯ ಯಂತ್ರವನ್ನು ಖರೀದಿಸಲು ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್‍ನಿಂದ ಸಾಲವನ್ನು ಒದಗಿಸಿಕೊಟ್ಟಿತು.

ಹಸಿರ ಸಮೃದ್ಧಿಗೆ ಆಸರೆಯಾದ ನಿರುಪಯುಕ್ತ ನೀರು

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದಲ್ಲಿಯ ಮರಿಕುಂಬಿಮಠ ಅವಿಭಕ್ತ ಕುಟುಂಬ ‘ಕೂಡಿಬಾಳಿದರೆ ಸ್ವರ್ಗ ಸುಖ’ ಅನ್ನುವಂತೆ ಅವಿಭಕ್ತ ಕುಟುಂಬದವರಂತೆ ಇತರರಿಗೆ ಅನುಕರಣೀಯರಾಗಿಹರು.

ತಂತ್ರಜ್ಞಾನ ಆಧಾರಿತ ಹೈನುಗಾರಿಕೆ ಒಂದು ಮಾದರಿ

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಶ್ರೀರಾಂಪುರ ಕಾಲೋನಿಯ 23 ವರ್ಷದ ವಯಸ್ಸಿನ ಸಾಗರ್ ಎಂಬಾತ ಆಧುನಿಕ ಪದ್ದತಿಯಲ್ಲಿ ಹೈನುಗಾರಿಕೆಯನ್ನು ನಡೆಸಿ ಸೈ ಎನಿಸಿಕೊಂಡಾತ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚುಂಚನಕಟ್ಟೆ ವಲಯದ ಶ್ರೀರಾಂಪುರ ಕಾಲೋನಿಯಲ್ಲಿ “ಜೋಡಿ ಎತ್ತು ಪ್ರಗತಿ ಬಂಧು” ತಂಡಕ್ಕೆ ಸೇರಿಕೊಂಡು ಹೈನುಗಾರಿಕೆಯನ್ನು ಆದಾಯೋತ್ಪನ್ನ ಚಟುವಟಿಕೆಯಾಗಿ ಆಯ್ಕೆ ಮಾಡಿಕೊಂಡು ಯಶಸ್ಸನ್ನು ಸಾಧಿಸಿದಾತ.

ಅನಾರೋಗ್ಯ ಅಡ್ಡಿಯಾಗಲಿಲ್ಲ ಆತ್ಮವಿಶ್ವಾಸದ ನಡಿಗೆಗೆ

‘ಕ್ರಿಯಾಶೀಲತೆಯು ವೃಧ್ಧಾಪ್ಯವನ್ನು ಓಡಿಸುವುದರಲ್ಲಿ ಸಂಶಯವೇ ಇಲ್ಲ.’ ‘ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಎಂದೂ ಮುಪ್ಪಿಲ್ಲ’ ಎಂಬುದಕ್ಕೆ ಉದಾಹರಣೆಯೇ ಶ್ರೀಮತಿ ಸುರೇಖಾ ನಾಯ್ಕ. ಮೂಲತಃ ಮಂಗಳೂರಿನ ಪ್ರಾಂತ್ಯದವರಾದ ಇವರು ನೆಲಸಿರುವುದು ನವಲಗುಂದ ತಾಲ್ಲೂಕಿನ ಭದ್ರಾಪುರದಲ್ಲಿ.

ಕುಟುಂಬಕ್ಕೆ ಆಶಾಕಿರಣವಾದ ಧರ್ಮಸ್ಥಳ ಯೋಜನೆ

ಕುಟುಂಬಕ್ಕೆ ಆಶಾಕಿರಣವಾದ ಧರ್ಮಸ್ಥಳ ಯೋಜನೆ ಯಡವನಹಳ್ಳಿ ವಲಯದ ತಳಲುತೊರೆ ಗ್ರಾಮದ ಆಂಜನೇಯ ಸ್ವಾಮಿ ಸ್ವಸಹಾಯ ಸಂಘದ ಸದಸ್ಯರಾದ ಅನುಷಾರವರು ತಾಲೂಕಿಗೆ ಯೋಜನೆಯು ಬಂದಾಗ ಸಂಘಕ್ಕೆ ಸೇರಿದರು. ಈ ರೀತಿ ಮಂಜುನಾಥ ಸ್ವಾಮಿಯ ಕೃಪೆ ನಮ್ಮ ಕುಟುಂಬದ ಉನ್ನತಿಗೆ ಕಾರಣವಾಗಿದೆ ಎಂದು ಹೆಮ್ಮೆಯಿಂದ ತಿಳಿಸಿರುತ್ತಾರೆ.